Revelation of John 17

ಬಾಬೆಲೆಂಬ ಜಾರಸ್ತ್ರೀಯ ನಾಶವು

1
17:1 ಪ್ರಕ. 15:7:
ಏಳು ಬಟ್ಟಲುಗಳನ್ನು ಹಿಡಿದಿದ್ದ
17:1 ಪ್ರಕ. 21:9
ಏಳು ಮಂದಿ ದೇವದೂತರಲ್ಲಿ ಒಬ್ಬನು ಬಂದು ನನಗೆ ಹೇಳಿದನು, <<ಬಾ,
17:1 ಯೆರೆ. 51:13; ಪ್ರಕ. 17:15:
ಬಹಳ ನೀರುಗಳ ಮೇಲೆ ಕುಳಿತ್ತಿರುವ
17:1 ನಹೂ. 3:4; ಪ್ರಕ. 19:2; ಯೆಶಾ. 1:21; ಯೆರೆ. 2:20
ಮಹಾ ಜಾರಸ್ತ್ರೀಗೆ ಆಗುವ ನ್ಯಾಯತೀರ್ಪನ್ನು ನಿನಗೆ ತೋರಿಸುತ್ತೇನೆ.
2
17:2 ಅಥವಾ ಅವಳ ದುಷ್ಕರ್ಮವನ್ನು ನೋಡಿ.
ಅವಳೊಂದಿಗೆ ಭೂರಾಜರು
17:2 ಅಂದರೆ, ದೇವದ್ರೋಹ; ಯೆಶಾ. 23:17; ನಹೂ. 3:4:
ಜಾರತ್ವ ಮಾಡಿದರು ಮತ್ತು ಭೂನಿವಾಸಿಗಳು ಆಕೆಯ ಜಾರತ್ವವೆಂಬ ದ್ರಾಕ್ಷಾರಸವನ್ನು ಕುಡಿದು
17:2 ಯೆರೆ. 51:7; ಪ್ರಕ. 14:8:
ಮತ್ತರಾದರು>> ಎಂದು ಹೇಳಿದನು.

3ಆಗ ಅವನು ದೇವರಾತ್ಮವಶನಾದ ನನ್ನನ್ನು
17:3 ಪ್ರಕ. 21:10; ಯೆರೆ. 43:5:
ಎತ್ತಿಕೊಂಡು ಮರುಭೂಮಿಗೆ ಹೋದನು. ಅಲ್ಲಿ ನಾನು
17:3 ಪ್ರಕ. 12:3:
ಕಡುಗೆಂಪು ಬಣ್ಣದ ಮೃಗದ ಮೇಲೆ ಕುಳಿತಿದ್ದ ಒಬ್ಬ ಸ್ತ್ರೀಯನ್ನು ಕಂಡೆನು. ಆ ಮೃಗದ ಮೈಮೇಲೆಲ್ಲಾ
17:3 ಪ್ರಕ. 13:1
ದೂಷಣೆಗಳಿಂದ ಕೂಡಿದ್ದ ಹೆಸರುಗಳು ತುಂಬಿದ್ದವು.
17:4 ಪ್ರಕ. 17:7, 9, 12:
ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಇದ್ದವು.
4ಆ ಸ್ತ್ರೀಯು
17:4 ನೇರಳೆ. ಪ್ರಕ. 18:16:
ಧೂಮ್ರವರ್ಣದ ವಸ್ತ್ರಗಳನ್ನೂ ರಕ್ತಾಂಬರವನ್ನೂ ಧರಿಸಿಕೊಂಡು ಚಿನ್ನ, ರತ್ನ, ಮುತ್ತುಗಳಿಂದ ಅಲಂಕರಿಸಿಕೊಂಡಿದ್ದಳು. ಆಕೆಯು ತನ್ನ ಕೈಯಲ್ಲಿ
17:4 ಯೆರೆ. 51:7; ಪ್ರಕ. 18:6:
ಅಸಹ್ಯವಾದವುಗಳಿಂದಲೂ ಮತ್ತು ತನ್ನ ಅಶುದ್ಧ ಜಾರತ್ವಗಳಿಂದಲೂ ತುಂಬಿದ ಚಿನ್ನದ ಬಟ್ಟಲನ್ನು ಹಿಡಿದುಕೊಂಡಿದ್ದಳು.
5ಅವಳ ಹಣೆಯ ಮೇಲೆ, <<ಮಹತ್ತಾದ
17:5 ಪ್ರಕ. 14:8:
ಬಾಬೆಲೆಂಬ ಭೂಮಿಯಲ್ಲಿರುವ ಜಾರಸ್ತ್ರೀಯರ ಅಸಹ್ಯವಾದ ಕಾರ್ಯಗಳ ಮಾತೆ>> ಎಂಬ
17:5 ವ. 7:
ಹೆಸರನ್ನು ಬರೆಯಲಾಗಿತ್ತು.

6ಆ ಸ್ತ್ರೀಯು
17:6 ಪ್ರಕ. 16:6; 13:15:
ನೀತಿವಂತರ ರಕ್ತವನ್ನೂ
17:6 ಪ್ರಕ. 2:13:
ಯೇಸುವಿಗೋಸ್ಕರ ಸಾಕ್ಷಿನೀಡಿ ಹತರಾದವರ ರಕ್ತವನ್ನು ಕುಡಿದು ಮತ್ತಳಾಗಿರುವುದನ್ನು ಕಂಡೆನು.

ನಾನು ಅವಳನ್ನು ನೋಡಿ ಅತ್ಯಾಶ್ಚರ್ಯಪಟ್ಟೆನು.
7ಆದರೆ ಆ ದೇವದೂತನು ನನ್ನನ್ನು ಕುರಿತು ಹೇಳಿದ್ದೇನಂದರೆ <<ನೀನು ಆಶ್ಚರ್ಯ ಪಡುತ್ತಿರುವುದೇತಕ್ಕೆ? ಆ ಸ್ತ್ರೀಯ ವಿಷಯವಾಗಿಯೂ, ಅವಳ ವಾಹನವಾಗಿದ್ದ ಮೃಗದ ವಿಷಯವಾಗಿಯೂ, ಏಳು ತಲೆಗಳೂ ಹತ್ತು ಕೊಂಬುಗಳುಳ್ಳ ಮೃಗ ಇರುವ
17:7 ವ. 5:
ಗೂಢಾರ್ಥವನ್ನು
17:7 ವ. 11; ಪ್ರಕ. 1:4; 13:3:
ನಾನು ನಿನಗೆ ವಿವರಿಸುತ್ತೇನೆ.

8ನೀನು ಕಂಡ ಆ ಮೃಗವು ಮೊದಲು ಇದದ್ದೂ, ಈಗ ಇಲ್ಲದ್ದೂ, ಮತ್ತು
17:8 ಪ್ರಕ. 9:1:
ಅಧೋಲೋಕದೊಳಗಿನಿಂದ
17:8 ಪ್ರಕ. 11:7:
ಏರಿ ಬಂದು ವಿನಾಶಕ್ಕೆ ಹೋಗುವುದಕ್ಕಾಗಿರುವುದೂ ಆಗಿದೆ. ಈ ಲೋಕವು ಸೃಷ್ಟಿಯಾದಂದಿನಿಂದ ಯಾರ ಹೆಸರುಗಳು
17:8 ಪ್ರಕ. 3:5:
ಜೀವಬಾಧ್ಯರ ಪುಸ್ತಕದಲ್ಲಿ ಬರೆದಿರುವುದಿಲ್ಲವೋ, ಅವರು ಈ ಮೃಗವನ್ನು ನೋಡಿ ಇದು ಮೊದಲು ಇದ್ದಿತ್ತು, ಈಗ ಇಲ್ಲ, ಆದರೆ ಇನ್ನು ಮುಂದೆ ಬರಲಿದೆ ಎಂದು ಆಶ್ಚರ್ಯಪಡುವರು.

9ಇದನ್ನು ಗ್ರಹಿಸಿಕೊಳ್ಳಲು
17:9 ಪ್ರಕ. 13:18:
ಜ್ಞಾನವೂ, ವಿವೇಕವೂ ಬೇಕು. ಆ ಏಳು ತಲೆಗಳು ಆ ಹೆಂಗಸು ಕುಳಿತುಕೊಂಡಿರುವ ಏಳು ಬೆಟ್ಟಗಳಾಗಿವೆ.
10
17:10 ಅಥವಾ, ಇದಲ್ಲದೆ ಏಳು ಮಂದಿ ಅರಸುಗಳಿದ್ದಾರೆ.
ಇದಲ್ಲದೆ ಅವು ಏಳು ರಾಜರುಗಳೂ ಆಗಿದ್ದಾರೆ. ಅವರಲ್ಲಿ ಐದು ರಾಜರು ಬಿದ್ದಿದ್ದಾರೆ. ಒಬ್ಬನು ಇದ್ದಾನೆ. ಮತ್ತೊಬ್ಬನು ಇನ್ನು ಬಂದಿಲ್ಲ. ಅವನು ಬಂದಾಗ ಸ್ವಲ್ಪ ಕಾಲ ಇರಬೇಕಾಗುತ್ತದೆ.

11ಇದಲ್ಲದೆ
17:11 ವ. 8; ಪ್ರಕ. 11:17:
ಮೊದಲಿದ್ದು ಈಗ ಇಲ್ಲದಿರುವ ಆ ಮೃಗವು ತಾನೇ ಎಂಟನೆಯ ಅರಸನು. ಆದರೆ ಅವನು ಆ ಏಳು ರಾಜರುಗಳಲ್ಲಿ ಒಬ್ಬನಾಗಿದ್ದಾನೆ, ಅವನು ನಾಶಕ್ಕೆ ಹೋಗುವನು.

12
17:12 ವ. 16; ದಾನಿ. 7:24; ಜೆಕ. 1:18-21; ಪ್ರಕ. 13:1:
ನೀನು ನೋಡಿದ ಆ ಹತ್ತು ಕೊಂಬುಗಳು ಇನ್ನೂ ರಾಜ್ಯವನ್ನು ಹೊಂದದಿರುವ ಹತ್ತು ರಾಜರುಗಳಾಗಿದ್ದಾರೆ. ಆದರೆ ಅವು ರಾಜರಂತೆ
17:12 ಪ್ರಕ. 18:10, 17, 19:
ಒಂದು ಗಳಿಗೆಯವರೆಗೆ ಆಳುವ ಅಧಿಕಾರವನ್ನು ಮೃಗದೊಂದಿಗೆ ಹೊಂದುವರು.
13ಅವರು ಏಕ ಮನಸ್ಸುಳ್ಳವರಾಗಿ ತಮ್ಮ ಬಲವನ್ನೂ ಅಧಿಕಾರವನ್ನೂ ಮೃಗಕ್ಕೆ ಕೊಡುವರು. 14
17:14 ಪ್ರಕ. 16:14:
ಅವರು ಯಜ್ಞದ ಕುರಿಮರಿಯಾದಾತನಿಗೆ ವಿರುದ್ಧವಾಗಿ ಯುದ್ಧ ಮಾಡುವರು. ಆದರೆ ಆತನು
17:14 ಧರ್ಮೋ. 10:17; ಕೀರ್ತ. 136:3; ದಾನಿ. 2:47; 1 ತಿಮೊ. 6:15; ಪ್ರಕ. 19:16; ಅ. ಕೃ. 10:36:
ಕರ್ತರ ಕರ್ತನೂ ರಾಜಾಧಿರಾಜನೂ ಆಗಿರುವುದರಿಂದ ಕುರಿಮರಿಯು
17:14 ಪ್ರಕ. 3:21:
ಅವರನ್ನು ಜಯಿಸುವನು ಮತ್ತು ದೇವರು
17:14 ಲೂಕ. 18:7; ರೋಮಾ. 1:6:
ಕರೆದವರೂ, ದೇವರಾದುಕೊಂಡವರೂ, ನಂಬಿಗಸ್ತರೂ ಆಗಿರುವ ಆತನವರು ಕುರಿಮರಿಯೊಂದಿಗೆ ಜಯದಲ್ಲಿ ಪಾಲುಗಾರರಾಗುವರು.>>

15ಇನ್ನೂ ಆ ದೇವದೂತನು ನನಗೆ ಹೇಳಿದ್ದೇನಂದರೆ,
17:15 ವ. 1:
<<ಆ ಜಾರಸ್ತ್ರೀ ಕುಳಿತ್ತಿದ್ದ ನೀರನ್ನು ನೀನು ನೋಡಿದೆಯಲ್ಲ, ಅವು ಜನಾಂಗಳನ್ನು, ಜನ ಸಮೂಹಗಳನ್ನು, ರಾಷ್ಟ್ರಗಳನ್ನು, ಭಾಷೆಗಳನ್ನು ಸೂಚಿಸುತ್ತದೆ ಎಂದನು.

16ಇದಲ್ಲದೆ ನೀನು ನೋಡಿದ
17:16 ವ. 12; ದಾನಿ. 7:24; ಜೆಕ. 1:18-21; ಪ್ರಕ. 13:1:
ಹತ್ತು ಕೊಂಬುಗಳು ಮತ್ತು ಮೃಗವನ್ನು ಕಂಡೆಯಲ್ಲ? ಅವುಗಳು ಜಾರಸ್ತ್ರೀಯನ್ನು ದ್ವೇಷಿಸಿ, ಅವಳನ್ನು ಗತಿಯಿಲ್ಲದವಳನ್ನಾಗಿಯೂ
17:16 ಯೆಹೆ. 16:37, 39:
ಬಟ್ಟೆ ಇಲ್ಲದವಳನ್ನಾಗಿಯೂ ಮಾಡಿ ಅವಳ ಮಾಂಸವನ್ನು ತಿಂದು,
17:16 ಪ್ರಕ. 18:8; ಯಾಜ. 21:9:
ಅವಳನ್ನು ಬೆಂಕಿಯಲ್ಲಿ ಸುಟ್ಟುಬಿಡುವರು.
17ಏಕೆಂದರೆ ದೇವರು ತನ್ನ ವಾಕ್ಯವನ್ನು ನೆರವೇರಿಸುವುದಕ್ಕಾಗಿಯೂ, ನೆರವೇರಿಸುವಂತೆಯೂ ತನ್ನ ಚಿತ್ತವನ್ನು ಅವರು ಒಂದೇ ಅಭಿಪ್ರಾಯವುಳ್ಳವರಾಗಿ
17:17 2 ಥೆಸ. 2:11:
ತಮ್ಮ ಅಧಿಕಾರವನ್ನು ಮೃಗಕ್ಕೆ ಕೊಡುವುದಕ್ಕೂ ಇದನ್ನು ಅವುಗಳ ಹೃದಯಗಳಲ್ಲಿ ಇರಿಸಿದ್ದನು.

ನೀನು ಕಂಡ ಆ ಸ್ತ್ರೀಯು ಭೂರಾಜರ ಮೇಲೆ ಆಳುವ ಅಧಿಕಾರ ಹೊಂದಿದ
17:18 ಪ್ರಕ. 16:19; 11:8:
ಮಹಾನಗರಿಯೇ ಆಗಿದೆ.>>

18

Copyright information for KanULB